ಭದ್ರತಾ ಪಡೆಯ ಶುಕ್ರವಾರದ ಕಾರ್ಯಾಚರಣೆ (Anti Naxal Operation) ಎಡಪಂಥೀಯ ಉಗ್ರವಾದಕ್ಕೆ ಬಹುದೊಡ್ಡ ಹೊಡೆತವನ್ನು ನೀಡಿದೆ. ಈ ಬೃಹತ್ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮಾವೋವಾದಿಗಳ ಮೋಸ್ಟ್ ವಾಂಟೆಡ್ ಕಮಾಂಡರ್ಗಳಲ್ಲಿ ಒಬ್ಬನಾದ ಕಮಲೇಶ್ ಅಲಿಯಾಸ್ ಆರ್.ಕೆ. ಮತ್ತು ಗುಂಪಿನ ವಕ್ತಾರ ನಿತಿ ಅಲಿಯಾಸ್ ಊರ್ಮಿಳಾ ಅವರನ್ನು ಹತ್ಯೆ ಮಾಡಿದೆ. ಇವರಿಬ್ಬರು ದಂಡಕಾರಣ್ಯ ವಿಶೇಷ ವಲಯ ಸಮಿತಿಯಲ್ಲಿ ಪ್ರಮುಖರಾಗಿದ್ದರು.