Sunday, 5th January 2025

ನಟಿ ಲೀಲಾವತಿ ಅಂತಿಮ ದರ್ಶನ, ಸೋಲದೇವನಹಳ್ಳಿ ಅಂತಿಮ ಸಂಸ್ಕಾರ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನಕ್ಕಾಗಿ ನೆಲಮಂಗಲದ ಅಂಬೇಡ್ಕರ್​ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದೀಗ ಅಂಬೇಡ್ಕರ್​​ ಮೈದಾನದಿಂದ ‌ಲೀಲಾವತಿ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿರಸಲಾಗಿದ್ದು, ಸಾರ್ವಜನಿಕರು, ಗಣ್ಯರು ದರ್ಶನ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ. ಸುಮಾರು 11 ಗಂಟೆಯಿಂದ ಪಾರ್ಥೀವ ಶರೀರದ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಸರಿ ಸುಮಾರು 2 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿದೆ. ಚಿತ್ರರಂಗದವರೂ ಸೇರಿದಂತೆ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. […]

ಮುಂದೆ ಓದಿ