ಚೆನ್ನೈ: ನಟಿ ಹಾಗೂ ರಾಜಕಾರಣಿ ರೋಜಾ ಅವರು ತಮಿಳುನಾಡಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದಾಗ ಜನರು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ, ಆದರೆ ಸ್ವಚ್ಛತಾ ಸಿಬ್ಬಂದಿಗೆ ಅಂತರ ಕಾಯ್ದುಕೊಳ್ಳುವಂತೆ ರೋಜಾ ಸನ್ನೆ ಮಾಡಿದ ಅವರ ಮುಖವೇ ಬಾಡಿ ಹೋಗಿತ್ತು. ನಟಿ ಹಾಗೂ ವೈಎಸ್ಆರ್ಪಿ ನಾಯಕಿ ರೋಜಾ ಸೆಲ್ವಸ್ವಾಮಿ ತಮ್ಮ ಪತಿ ಜತೆಗೆ ತಮಿಳುನಾಡಿನ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿದ್ದವರು ನಾ ಮುಂದು ತಾ ಮುಂದು ಎಂದು ಸೆಲ್ಫಿಗೆ ಮುಗಿ ಬಿದ್ದರು, ಆದರೆ ಸ್ವಚ್ಛತಾ ಸಿಬ್ಬಂದಿ ಅವರ ಬಳಿಗೆ ಬಂದಾಗ ಅಂತರ ಕಾಯ್ದು […]