Thursday, 24th October 2024

ತೆಲಂಗಾಣ ಹೆದ್ದಾರಿ ಯೋಜನೆ: ₹1,039.90 ಕೋಟಿಗೆ ಅದಾನಿ ತೆಕ್ಕೆಗೆ

ನವದೆಹಲಿ: ತೆಲಂಗಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆದ್ದಾರಿ ಯೋಜನೆಯನ್ನು ₹1,039.90 ಕೋಟಿಗೆ ಅದಾನಿ ರೋಡ್‌ ಟ್ರಾನ್ಸ್‌ಪೋರ್ಟ್‌ ಲಿಮಿಟೆಡ್‌ ತನ್ನದಾಗಿಸಿಕೊಂಡಿದೆ. ತೆಲಂಗಾಣದಲ್ಲಿ ಕೊದಾಡ್‌ನಿಂದ ಖಮ್ಮಂ ವರೆಗೂ ನಾಲ್ಕು ಪಥದ ಎನ್‌ಎಚ್‌-365ಎ ರಸ್ತೆ ನಿರ್ಮಾಣಕ್ಕೆ ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಯೋಜನೆಯ ಗುತ್ತಿಗೆ ದೊರೆತಿದೆ’ ಎಂದು ಕಂಪನಿ ಮಾಹಿತಿ ನೀಡಿದೆ. ಯೋಜನೆಯ ಬಿಡ್‌ ಮೊತ್ತ ₹ 1,039.90 ಕೋಟಿ ರೂಪಾಯಿ ಎಂದು ಕಂಪನಿ ಹೇಳಿದೆ. ಯೋಜನೆಯ ನಿರ್ಮಾಣದ ಅವಧಿ ಎರಡು ವರ್ಷಗಳು ಹಾಗೂ ಕಾರ್ಯಾಚರಣೆಯ ಅವಧಿ 15 ವರ್ಷಗಳು ಎಂದು ತಿಳಿಸಿದೆ. ಎಆರ್‌ಟಿಎಲ್‌, […]

ಮುಂದೆ ಓದಿ