ತನ್ನಿಮಿತ್ತ ಸಂಗಮೇಶ ಆರ್.ನಿರಾಣಿ ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿ ನೆಲ, ಜಲ ನೀರಾವರಿ ಯೋಜನೆಗಳ ಕುರಿತು ಅಪಾರ ಅನುಭವ ಹಾಗೂ ಆಸಕ್ತಿ ಇರುವ ಉತ್ತರ ಕರ್ನಾಟಕ ಮೂಲದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಯಾಗಿದ್ದಾರೆ. ಪ್ರತಿಬಾರಿಯೂ ಕಾವೇರಿಗೆ ಮೊದಲು ಬಾಗಿಣ ಅರ್ಪಣೆಯಾಗುತ್ತಿತ್ತು. ಆದರೆ ಈ ಬಾರಿ ಕೃಷ್ಣೆಗೆ ಬಾಗಿಣ ಅರ್ಪಣೆಯಲ್ಲಿ ಪ್ರಥಮ ಆದ್ಯತೆ ನೀಡಿದ ನಮ್ಮ ಹೆಮ್ಮೆಯ ಮುಖ್ಯಮಂತ್ರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. 6 ದಶಕಗಳಿಂದ ಕುಂಟುತ್ತಾ ಸಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ಮೂಲಕ […]