ಕಸಾಪನಿಂದ 110 ವಿದ್ಯಾರ್ಥಿಗಳಿಗೆ ಗುಣಮಣಿ ಪ್ರಶಸ್ತಿ ಪ್ರದಾನ ಆಳಂದ: ಮಾತೃಭಾಷಾ ಶಿಕ್ಷಣದಿಂದಲೇ ಜೀವನದಲ್ಲಿ ಸಾಧನೆಗೆ ಅವಕಾಶವಿದೆ ಕನ್ನಡ ಕಲಿಕೆಗೆ ಹಿಂಜರಿಯದೆ, ಆಂಗ್ಲಭಾಷೆಗೆ ಬೆನ್ನು ಬೀಳದೆ ಕನ್ನಡ ಶಿಕ್ಷಣದ ಕಲಿಕೆಗೆ ಒತ್ತು ನೀಡಿ ಉನ್ನತ ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪಟ್ಟಣದ ಆರ್ಯ ಸಮಾಜ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಗುಣಮಣಿ’ ಪ್ರಶಸ್ತಿ ಪ್ರದಾನ […]