ಹೊಸದಿಲ್ಲಿ: ಉತ್ತರ ಪ್ರದೇಶ ಪೊಲೀಸ್ ನ ಉಗ್ರ ನಿಗ್ರಹ ಪಡೆಯು ಐಸಿಸ್ ಉಗ್ರಗಾಮಿ ಸಂಘಟನೆಯ ಜೊತೆ ನಂಟು ಹೊಂದಿರುವ ಆರೋಪದಡಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಐಸಿಸ್ ನ ಅಲಿಗಢ ಘಟಕದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ನೋಮನ್, ನಾಜಿಮ್ ಮತ್ತು ನಾವೇದ್ ಎಂಬ ಮೂವರನ್ನು ಬಂಧಿಸಲಾಗಿದೆ. ಈ ಮೂವರಿಂದ ಉಗ್ರ ಪ್ರಚೋದನಕಾರಿ ಬರಹಗಳೂ ಪತ್ತೆಯಾಗಿದೆ ಎಂದು ಮೂಲಗಳು ವರದಿ ಮಾಡಿದೆ. ಎಎಂಯು ವಿದ್ಯಾರ್ಥಿಗಳಾದ ನೋಮನ್, ನಾಜಿಮ್ ಮತ್ತು ನಾವೇದ್ ಅವರು ಐಸಿಸ್‌ನ ಅಲಿಘರ್ […]