ಅಭಿವ್ಯಕ್ತಿ ಸರಸ್ವತಿ ವಿಶ್ವನಾಥ್ ಪಾಟೀಲ್ ಅತ್ಯಾಚಾರಗಳು ಖಚಿತವಾಗಿ ಮಾನವ ಜಗತ್ತಿನ ವಿಕೃತ ಬೆಳವಣಿಗೆಗಳು. ಹಿಂಸೆ ಅಥವಾ ಕ್ರೌರ್ಯವೆಂಬುದು ವಿಶ್ವಕ್ಕೆ ಹೊಸ ದಲ್ಲ. ಪ್ರಾಣಿಪ್ರಪಂಚವೂ ಅದಕ್ಕೆ ಹೊರತಲ್ಲ. ಆದರೆ, ಸೃಷ್ಟಿಯ ಅತ್ಯಂತ ಬುದ್ಧಿವಂತ ಪ್ರಾಣಿಯಾಗಿ ಬೆಳೆದ ಮಾನವ ಇನ್ಯಾವ ಜೀವಜಂತುವೂ ಕಂಡು ಕೇಳರಿಯದ ವಿಕೃತತೆಯನ್ನೂ ಬೆಳೆಸಿದ್ದಾನೆ. ಬಲಾತ್ಕಾರದ ಲೈಂಗಿಕತೆ ಮತ್ತು ಅದಕ್ಕಾಗಿ ನಡೆಯುವ ಹಿಂಸೆಯೆಂಬುದನ್ನು ಇಡೀ ಜೀವಸೃಷ್ಟಿಯಲ್ಲಿ ಮನುಷ್ಯಜೀವಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ಅತ್ಯಾಚಾರ ಎಂಬುದು ಮನುಷ್ಯನ ವಿಕೃತಿಯ ಪಿಡುಗಾಗಿರುವುದು ದುರಂತ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, […]