ಗುರಂಗಾವ್: ಸಿಆರ್ ಪಿಎಫ್ ಮಹಿಳಾ ಸಿಬ್ಬಂದಿಯನ್ನೊಳಗೊಂಡ ತಂಡ ಕೋಬ್ರಾ ಕಮಾಂಡೋ ಘಟಕವನ್ನು ಶನಿವಾರ ಸೇರ್ಪಡೆಗೊಂಡಿದೆ. ಈ ತಂಡವನ್ನು ಶೀಘ್ರದಲ್ಲಿಯೇ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ. ಇಲ್ಲಿಯವರೆಗೂ ಈ ವ್ಯವಹಾರವನ್ನು ಪುರುಷರೇ ನೋಡಿಕೊಳ್ಳುತ್ತಿದ್ದರು. ಕೋಬ್ರಾ ತಂಡದಲ್ಲಿನ ಬಹುತೇಕ ಕಮಾಂಡೋಗಳು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತದೆ. ಕೆಲವು ತಂಡಗಳನ್ನು ತುರ್ತು ಪರಿಸ್ಥಿತಿಯ ಕಾರ್ಯಾಚರಣೆಗಾಗಿ ಬಳಸಿಕೊಳ್ಳಲಾಗುತ್ತದೆ. ಕಾದರ್ ಪುರ ಗ್ರಾಮದ ಸಿಆರ್ ಪಿಎಫ್ ಕ್ಯಾಂಪಿನಲ್ಲಿ ಸಿಆರ್ ಪಿಎಫ್ ನಿರ್ದೇಶಕ ಜನರಲ್ ಎ. ಪಿ. ಮಹೇಶ್ವರಿ ಸಮ್ಮುಖದಲ್ಲಿ […]