ವಾಷಿಂಗ್ಟನ್: ಅಮೆರಿಕದಲ್ಲಿ ಆಯಪಲ್ ವಾಚ್ ಮಾರಾಟ ನಿಷೇಧಿಸುವ ಆದೇಶ ಜಾರಿಯಾಗದಂತೆ ಮಾಡುವ ಆಯಪಲ್ನ ಪ್ರಯತ್ನಗಳು ವಿಫಲ ವಾಗಿವೆ. ಎರಡು ಆಯಪಲ್ ವಾಚ್ ಮಾದರಿಗಳಾದ ಆಯಪಲ್ ವಾಚ್ ಸೀರಿಸ್ 9 ಮತ್ತು ಆಪಲ್ ವಾಚ್ ಅಲ್ಟ್ರಾ 2 ಅನ್ನು ತನ್ನ ವೆಬ್ಸೈಟ್ನಲ್ಲಿ ಮತ್ತು ಮಳಿಗೆಗಳಲ್ಲಿ ಮಾರಾಟ ಮಾಡುವುದನ್ನು ನಿಲ್ಲಿಸುವುದಾಗಿ ತಿಳಿಸಿತ್ತು. ಆದರೆ, ಹಳೆಯ ಮಾದರಿಯ ವಾಚ್ಗಳ ಮಾರಾಟವನ್ನು ಮುಂದುವರಿಸಲಿದೆ. ಆಯಪಲ್ ವಾಚ್ನಲ್ಲಿರುವ ಬ್ಲಡ್ ಆಕ್ಸಿಜನ್ ಸೆನ್ಸರ್ ತಂತ್ರಜ್ಞಾನವು ಆಸ್ಪತ್ರೆಗಳಿಗೆ ವೈದ್ಯಕೀಯ ಸಲಕರಣೆ ತಯಾರಿಸುವ ಕಂಪನಿಯಾದ ಮಾಸಿಮೊದ ಕಾಪಿರೈಟ್ ಉಲ್ಲಂಘನೆಯಾಗಿದೆ […]