ಅಡಕೆ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ದೇಶದೊಳಗಿನ ಸಂಶೋಧನಾ ಸಂಸ್ಥೆಗಳ ಮೂಲಕವೇ ಅಧ್ಯಯನ ನಡೆಸುವ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ಇದುವರೆಗೂ ನಡೆದ ಹಲವು ಅಧ್ಯಯನಗಳು ಪಾನ್ ಮಸಾಲಾ, ಗುಟ್ಕಾದಂತಹ ಮಿಶ್ರಣಗಳಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿವೆ. ಅಡಕೆಯೊಂದನ್ನೇ ಕೇಂದ್ರವಾಗಿರಿಸಿ ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಸಮಗ್ರ ಅಧ್ಯಯನ ನಡೆದಿಲ್ಲ. ಆದರೆ ಕ್ಯಾನ್ಸರ್‌ಕಾರಕ ಎಂದು ಹೇಳಲಾದ ಗುಟ್ಕಾ ಮತ್ತು ಪಾನ್ ಮಸಾಲಾದ ಮೇಲಿನ ನಿರ್ಬಂಧದ ವೇಳೆ ಅಡಕೆಯ ಹೆಸರನ್ನೂ ಉಲ್ಲೇಖಿಸಲಾಗಿದೆ. […]