ತುಮಕೂರು: ಪತ್ರಕರ್ತರಿಗೆ ಕೌತುಕ ಮತ್ತು ಸ್ಪಷ್ಟತೆ ಬಹಳ ಮುಖ್ಯ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಯಶಸ್ಸಿಗೆ ವೃತ್ತಿ ಮತ್ತು ಪ್ರವೃತ್ತಿ ಒಂದೇ ಆಗಿರಬೇಕು. ಅದರಿಂದ ಕಾರ್ಯಕ್ಷಮತೆ ಲಭಿಸುತ್ತದೆ ಎಂದು ಏಷ್ಯಾ ನೆಟ್ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಹೇಳಿದರು. ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಇಂಪ್ರೆಶನ್-2023′ ಮಾಧ್ಯಮ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ನಿರಂತರ ಕಲಿಕೆ ಮತ್ತು ಅಭ್ಯಾಸದಿಂದ ತಜ್ಞತೆ ಲಭಿಸುತ್ತದೆ. ಬದಲಾವಣೆಗೆ ವೇಗವಾಗಿ ಒಗ್ಗಿಕೊಳ್ಳುವ ಕ್ಷಮತೆ ಬೆಳೆಸಿಕೊಳ್ಳಬೇಕು. ಮಾಧ್ಯಮ ಕಲಿಕಾರ್ಥಿಗಳು […]