ನಲ್ಬರಿ (ಅಸ್ಸಾಂ): ಅಸ್ಸಾಂನ ನಲ್ಬರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದು, 108 ಹಳ್ಳಿಗಳು ಪ್ರಸ್ತುತ ಜಲಾವೃತವಾಗಿವೆ. 45,000ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊಯಿರಾರಂಗ, ಬಟಗಿಲ ಗ್ರಾಮದ ಸುಮಾರು 200 ಕುಟುಂಬಗಳು ಈ ಪ್ರವಾಹದಿಂದ ಸಂತ್ರಸ್ತರಾಗಿದ್ದು, ಬಹುತೇಕ ಕುಟುಂಬಗಳು ಇದೀಗ ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿ ಕೊಂಡು ರಸ್ತೆ, ಒಡ್ಡುಗಳಲ್ಲಿ ಆಶ್ರಯ ಪಡೆದಿವೆ. ಅಸ್ಸಾಂ ಮತ್ತು ನೆರೆಯ ದೇಶ ಭೂತಾನ್ನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ನಂತರ ಪಗ್ಲಾಡಿಯಾ ನದಿಯ ನೀರಿನ ಮಟ್ಟವು ಅಪಾಯದ ಮಟ್ಟಕ್ಕಿಂತ […]