ಗುವಾಹಟಿ: ಅಸ್ಸಾಂ ತನ್ನ ವಿಶಿಷ್ಟ ರುಚಿಕರವಾದ ಟೀಗೆ ಪ್ರಸಿದ್ದ. ಇಲ್ಲಿನ ಟೀಗೆ ಮನ ಸೋಲದ ಚಹಾ ಪ್ರಿಯರಿಲ್ಲ. ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ 2022-2023ರ ಹಣಕಾಸು ವರ್ಷದಲ್ಲಿ ರೂ 3,300 ಕೋಟಿಗೂ ಹೆಚ್ಚು ಮೌಲ್ಯದ ಅಸ್ಸಾಂ ಚಹಾ ಪುಡಿ (ಟೀ) ಮಾರಾಟವಾಗಿದೆ ಎಂದು ಗುವಾಹಟಿ ಟೀ ಹರಾಜು ಕೇಂದ್ರದ ಅಧಿಕೃತ ಮಾಹಿತಿ ನೀಡಿದೆ. 2022-23ರ ಅವಧಿಯ ಚಹಾ ಹರಾಜು ಕೇಂದ್ರದಲ್ಲಿ ಪ್ರತಿ ಕೆಜಿ ಪುಡಿಗೆ 191.26 ರೂ.ವಿನಂತೆ ಸುಮಾರು 165 ಮಿಲಿಯನ್ ಕೆಜಿ ಚಹಾ ಪುಡಿ ಮಾರಾಟ ಮಾಡಲಾಗಿದೆ. […]