ನವದೆಹಲಿ: ಭಾರತ ಮಹಿಳಾ ಅಂಡರ್-17 ತಂಡದ ಸಹಾಯಕ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ವಜಾಗೊಳಿಸಲಾಗಿದೆ. ಅಲೆಕ್ಸ್ ಆಂಬ್ರೋಸ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ” ಅಂಡರ್ 17 ಮಹಿಳಾ ತಂಡದ ಕೋಚ್ ಅಲೆಕ್ಸ್ ಆಂಬ್ರೋಸ್ ಅವರನ್ನು ಲೈಂಗಿಕ ದುರ್ನಡತೆಗಾಗಿ ವಜಾಗೊಳಿಸಲಾಗಿದೆ. ಮುಂದಿನ ಕ್ರಮ ಪ್ರಕ್ರಿಯೆ ಯಲ್ಲಿದೆ” ಎಂದು ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ಸದಸ್ಯ ಡಾ.ಎಸ್.ವೈ. ಖುರೇಶಿ ಖಚಿತಪಡಿಸಿದ್ದಾರೆ. ಎಐಎಫ್ಎಫ್ ಜೂನ್ 30 ರಂದು ನೀಡಿದ ಹೇಳಿಕೆಯಲ್ಲಿ ಅಪರಾಧಿಯ ಹೆಸರನ್ನು ಉಲ್ಲೇಖಿಸದೆ ಅಥವಾ ಅಪರಾಧವನ್ನು […]