ಹಬ್ಬ-ಹರಿದಿನ ನಿರಂಜನ್ ಜೈನ್ ಕುದ್ಯಾಡಿ ಚೈತ್ರ, ಭಾದ್ರಪದ ಮತ್ತು ಮಾಘ ಮಾಸಗಳಲ್ಲಿ ಆಚರಿಸಲಾಗುವ ‘ದಶಲಕ್ಷಣ ಪರ್ವ’ಕ್ಕೆ ಜೈನ ಸಮುದಾಯದಲ್ಲಿಇನ್ನಿಲ್ಲದ ಮಹತ್ವವಿದೆ. ಭಾದ್ರಪದ ಮಾಸದಲ್ಲಿನ ಆಚರಣೆಯು ಈ ಬಾರಿ ಸೆಪ್ಟೆಂಬರ್ 8ರಿಂದ ಶುರುವಾಗಿದ್ದು ನಿರಂತರ ೧೦ ದಿನಗಳ ಕಾಲ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದಶಲಕ್ಷಣ ಪರ್ವದ ಕುರಿತಾದ ಕಿರುನೋಟ ಇಲ್ಲಿದೆ: ಯಾವ ವಿಚಾರವು ಸಕಲ ಜೀವರಾಶಿಗಳನ್ನು ದುಃಖ ಮತ್ತು ವೇದನೆಯಿಂದ ವಿಮುಕ್ತಿಗೊಳಿಸಿ ನಿಜವಾದ ಸುಖವನ್ನುನೀಡುವಲ್ಲಿ ನಿಮಿತ್ತವಾಗಿರುತ್ತದೆಯೋ ಅದು ಧರ್ಮವಾಗಿದೆ. ಆ ಧರ್ಮದ ಒಳತಿರುಳೇ ಧರ್ಮದ 10 ಲಕ್ಷಣ ವಾಗಿರುತ್ತದೆ. […]