ರಘುನಾಥವಾರ್ ತಾಪ್ಸೆ ವೈವಿಧ್ಯಮಯ ಸಂಸ್ಕೃತಿ, ವಾಸ್ತುಶಿಲ್ಪ ಕಲೆಗಳ ಬೀಡೆಂದು ಕರ್ನಾಟಕ ಖ್ಯಾತಿ ಪಡೆದಿದ್ದರೂ, ಪ್ರಚಾರದ ಕೊರತೆಯಿಂದಾಗಿ ಪ್ರವಾಸಿಗರನ್ನು ಸೆಳೆಯುವಲ್ಲಿ ವಿಫಲವಾಗಿರುವ ದೇವಾಲಯಗಳಲ್ಲಿ ವಿಜಯನಗರ ಜಿಯ ಹರಪನಹಳ್ಳಿ ತಾಲ್ಲೂಕಿನಲ್ಲಿರುವ ಬಾಗಳಿ ಗ್ರಾಮದ ಕಶ್ವರ ದೇವಾಲಯವೂ ಒಂದು. ಈ ಪ್ರಾಚೀನ ದೇಗುಲದ ಇತಿಹಾಸ ಪುಟಗಳನ್ನು ಗಮನಿಸಿದರೆ, ಸಾಕಷ್ಟು ಕುತೂಹಲ ಕಾರಿ ಮತ್ತು ವಿಶಿಷ್ಟ ವಿಚಾರಗಳು ಗಮನಕ್ಕೆ ಬರುತ್ತವೆ. ಬಾಗಳಿಯ ಕಲಿದೇವ ಎಂದು ಕರೆಯಲ್ಪಡುವ ಕಶ್ವರದೇವಾಲಯವು ಕಲ್ಯಾಣ ಚಾಲುಕ್ಯ ದೊರೆ ಅಹವಮಲ್ಲನ ಕಾಲದಲ್ಲಿ ಕ್ರಿ.ಶ.೯೮೭ ರಲ್ಲಿ ತಲೆಎತ್ತಿತು. ಇದನ್ನು ಕಟ್ಟಿಸುವ ಜವಾಬ್ದಾರಿ […]