ಬಾಗೇಪಲ್ಲಿ: ರಾಜ್ಯದ ರೈತ ಹೋರಾಟ ಇತಿಹಾಸದಲ್ಲಿ ನವಲಗುಂದ-ನರಗುಂದದಲ್ಲಿ ರೈತರ ಮೇಲೆ ಸರ್ಕಾರ ಗೋಲಿಬಾರ್ ನಡೆಸಿತು. ರೈತರ ಹೋರಾಟ ಬೆಂಬಲಿಸಿ 1980 ಆ.7 ರಂದು ಕಮ್ಯುನಿಸ್ಟರ ನೇತೃತ್ವದಲ್ಲಿ ಬಾಗೇಪಲ್ಲಿ ಯಲ್ಲಿ ಹೋರಾಟ ನಡೆಯಿತು. ಈ ಹೋರಾಟದ ವೇಳೆ ಪೊಲೀಸರು ಗೋಲಿಬಾರ್ ನಡೆಸಿ ದರು. ರೈತರಾದ ದದ್ದಿಮಪ್ಪ ಮತ್ತು ಆದಿನಾರಾಯಣರೆಡ್ಡಿ ಗೋಲಿ ಬಾರ್‌ಗೆ ಪ್ರಾಣತೆತ್ತರು. ಕೃಷಿಯನ್ನು ಉದ್ಯಮ ಎಂದು ಪರಿಗಣಿಸಿ, ಕೃಷಿ ಸರಕುಗಳಿಗೆ ಲಾಭದಾಯಕ ಬೆಲೆ ನಿಗದಿ ಪಡಿಸಬೇಕು. ಭೂ ಸುಧಾರಣೆ ಹಾಗೂ ಭೂ ಹಂಚಿಕೆ ಕಾರ್ಯಕ್ರಮಗಳನ್ನು ಜಾರಿ ಮಾಡ ಬೇಕು. […]