ಸಂಡೆ ಸಮಯ ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ 2014ರಲ್ಲಿ ತಾಯಿಯ ಜೊತೆ ಆಂಧ್ರ ಪ್ರದೇಶದ ಕಡಪದಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಲಕ್ಷ್ಮಿ ಮಹದೇವಪುರದಲ್ಲಿ ಪಿಜಿ ವಸತಿಯೊಂದನ್ನು ನಡೆಸುತ್ತಾರೆ. ತಮ್ಮ ತಂದೆಯ ಜಮೀನನ್ನು ಒತ್ತೆಯಿಟ್ಟು ಸಾಲ ಪಡೆದು ಪಿಜಿಯ ನಿರ್ವಹಣೆಗೆ ಬಂಡವಾಳ ಹೂಡಿದ್ದು, ಈ ವರ್ಷದ ಮಾರ್ಚ್ ತಿಂಗಳಿಂದ ಕೋವಿಡ್‌ನಿಂದಾಗಿ ಪಿಜಿಯಲ್ಲಿ ಕೇವಲ ಶೇ.10ರಷ್ಟು ನಿವಾಸಿಗಳಿರುವು ದರಿಂದಾಗಿ, ಲಕ್ಷ್ಮಿ ಸಾಲದ ಬಡ್ಡಿ ಕಟ್ಟಲು ಒದ್ದಾಡುತ್ತಿದ್ದಾರೆ. ವಸತಿ ಸೌಲಭ್ಯದ ಈ ವಿಭಾಗದಲ್ಲಿ ಲಕ್ಷ್ಮಿಯಂಥ ಪಿಜಿ ನಿರ್ವಾಹಕರು ಹಾಗೂ ಕಂಡೂಕಾಣದ ಮಧ್ಯವರ್ತಿಗಳು […]