ನವದೆಹಲಿ: ಬ್ರೈನ್ ಹ್ಯಾಮ್ರೇಜ್ ಸಮಸ್ಯೆಯಿಂದ ಹೋರಾಡುತ್ತಿದ್ದ ಬಾಂಗ್ಲಾದೇಶ ಚಿತ್ರರಂಗದ ನಟಿ ರಿಷ್ತಾ ಲಬೋನಿ ಶಿಮಾನಾ( 39) ಬಂಗಬಂಧು ಶೇಖ್ ಮುಜೀಬ್ ವೈದ್ಯಕೀಯ ಆಸ್ಪತ್ರೆಯಲ್ಲಿಇಹಲೋಕ ತ್ಯಜಿಸಿದ್ದಾರೆ. ನಟಿಯ ಸಾವಿನ ಸುದ್ದಿಯನ್ನು ಆಕೆಯ ಸಹೋದರ ಇಜಾಜ್ ಬಿನ್ ಮತ್ತು ಮಾಜಿ ಪತಿ ಪರ್ವೇಜ್ ಸಜ್ಜದ್ ಖಚಿತಪಡಿಸಿದ್ದಾರೆ. ಮೇ.21 ರಿಷ್ತಾ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಬ್ರೈನ್ ಹ್ಯಾಮ್ರೇಜ್ ನಿಂದ ಅಸ್ವಸ್ಥಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ(ಮೇ.29 ರಂದು) ತೀವ್ರ ಗಂಭೀರಗೊಂಡ ಅವರನ್ನು ನ್ಯೂರೋಸೈನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ […]