ಬೆಂಗಳೂರು: ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ (Bengaluru- Chennai Highway) ತಾಂಡಾಲಂ ಬಳಿ ಖಾಸಗಿ ಬಸ್ಸು ಹಾಗೂ ಲಾರಿಯ ನಡುವೆ ಅಪಘಾತ (Road Accident) ಸಂಭವಿಸಿದೆ. ಟಾರಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಸಂಸ್ಥೆಯ ಬಸ್ ಪಲ್ಟಿಯಾಗಿದ್ದು, ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿವೆ. ಖಾಸಗಿ ಸಂಸ್ಥೆಯ ಬಸ್ ಯೂ ಟರ್ನ್ ಮಾಡಲು ಮುಂದಾದಾಗ ಹಿಂದಿನಿಂದ ವೇಗವಾಗಿ ಬಂದ ಟಾರಸ್ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. […]