ಮುಂಬೈ: ಕೇರಳ ಸಿಪಿಎಂ ನಾಯಕ ದಿವಂಗತ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೋಯ್ ಕೊಡಿಯೇರಿ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ವರದಿಗಳ ಪ್ರಕಾರ ₹ 80 ಲಕ್ಷ ಪಾವತಿಸುವುದಾಗಿ ಬಿನೋಯ್ ದೂರುದಾರೆಯೊಂದಿಗೆ ರಾಜಿ ಮಾಡಿಕೊಂಡ ಬಳಿಕ ಎಫ್‌ಐಆರ್ ರದ್ದುಗೊಳಿಸಲಾಗಿದೆ. ಸೆ. 27ರಂದು ರಾಜಿ ನಡೆದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ನ್ಯಾಯಮೂರ್ತಿ ಗಳಾದ ರೇವತಿ ಮೋಹಿತೆ ದೆರೆ ಮತ್ತು ಎಸ್ ಎಂ ಮೋದಕ್ ಅವರಿದ್ದ ಪೀಠ ಪ್ರಕರಣ ರದ್ದುಗೊಳಿಸಿತು. ನ್ಯಾಯಾಲಯದ ವಿವರವಾದ ಆದೇಶದ […]