ನಾಗ್ಪುರ: ನಾಗ್ಪುರ ಮೂಲದ ಫುಡ್ ಬ್ಲಾಗರ್ ವಿವೇಕ್ ಮತ್ತು ಆಯೇಷಾ ತಮ್ಮ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಕಪ್ಪು ಬಣ್ಣದ ಇಡ್ಲಿ ಹಿಟ್ಟಿನಿಂದ ಇಡ್ಲಿ ತಯಾರಿಸಿ, ಅದರ ಮೇಲೆ ತುಪ್ಪ ಸುರಿದು, ನಾಗಪುರದ ವಾಲ್ಕರ್ಸ್ ಸ್ಟ್ರೀಟ್ನಲ್ಲಿ ಕಪ್ಪು ಇಡ್ಲಿ ದೊರೆಯುತ್ತದೆ ಎಂಬ ಒಕ್ಕಣೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಆದರೆ ವಿಡಿಯೋ ಕಂಡು ಕಂಗಾಲಾದ ನೆಟ್ಟಿಗರು, ‘ಬ್ರೋ ದಯವಿಟ್ಟು ಇಡ್ಲಿ ಮೇಲಿನ ದೌರ್ಜನ್ಯ ನಿಲ್ಲಿಸಿ’ ಎಂದು ಮನವಿ ಮಾಡಿದ್ದಾರೆ. ಮತ್ತೆ ಕೆಲವು ಇದು ಪಾತ್ರೆ ತೊಳೆಯುವ ಮೆಟಲ್ […]