ಬೆಂಗಳೂರು:ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬರುತ್ತಿರುವ ಬೆದರಿಕೆ ಕರೆಗಳಿಂದ ವಿದ್ಯಾರ್ಥಿ ಮತ್ತು ಪೋಷಕ ಸಮೂಹ ತೀವ್ರ ಆತಂಕಕ್ಕೊಳ ಗಾಗಿದ್ದು, ಶಾಲೆಗಳಲ್ಲಿ ಅಗ್ನಿ ಸುರಕ್ಷತೆ ಮಾದರಿಯಲ್ಲಿ ಮಕ್ಕಳ ರಕ್ಷಣೆಗಾಗಿ ಬಾಂಬ್ ನಿಷ್ಕ್ರಿಯಗೊಳಿಸುವ ಬಗ್ಗೆ ಸೂಕ್ತ ತರಬೇತಿ ನೀಡಿ ಪ್ರತ್ಯೇಕ ದಳ ಸ್ಥಾಪಿಸಬೇಕೆಂದು ಫುಡ್ ವೈರ್ ಇಂಡಿಯಾ ಸಂಸ್ಥೆಯ ಹಿರಿಯ ಸಲಹೆಗಾರ ಪ್ರದೀಪ್ ಸಿ.ಬಾರ್ಕೂರ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ, ಪೊಲೀಸ್ ಇಲಾಖೆ, ಸಂಘ ಸಂಸ್ಥೆಗಳು, ಆಸಕ್ತ ಯುವ ಸಮೂಹವನ್ನೊಳಗೊಂಡ ಪರಿಣಿತರ ತಂಡ ರಚಿಸಿದರೆ ಸುರಕ್ಷೆಯ ಭಾವನೆ ಮತ್ತಷ್ಟು ಗಟ್ಟಿಯಾಗುತ್ತದೆ. […]