ಹೆಚ್ಚಿದ ತೆರಿಗೆ, ಸೆಸ್‌ಗಳಿಂದ ರಾಜ್ಯದ ಸಾಲದ ಹೊರೆ ಕಡಿಮೆ ಪರಿಹಾರ ಕೇಳಲು ರಾಜ್ಯ ಪ್ಲ್ಯಾನ್ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು: ಅನೇಕ ರೀತಿಯ ಸೆಸ್ ಮತ್ತು ತೆರಿಗೆ ಪ್ರಸ್ತಾಪಗಳಿರುವ ಕೇಂದ್ರ ಬಜೆಟ್ ರಾಜ್ಯದಲ್ಲಿ ಸರಕಾರದ ಸಾಲದ ಹೊರೆ ಇಳಿಸಬಹುದು ಎಂದು ನಿರೀಕ್ಷೆ ಹೆಚ್ಚಾಗಿದೆ. ಅಷ್ಟೇ ಅಲ್ಲ. ಕೇಂದ್ರ ಸರಕಾರದಿಂದ ಸಿಗಬೇಕಿರುವ ಸುಮಾರು ₹9000 ಕೋಟಿ ಗಳಿಗೂ ಹೆಚ್ಚಿನ ಜಿಎಸ್‌ಟಿ ಬಾಕಿ ವಸೂಲಿಗೂ ನೆರವಾಗುವ ಸೂಚನೆ ಕಾಣುತ್ತಿದೆ. 2017ರಿಂದ ರಾಜ್ಯಕ್ಕೆ ಪ್ರತಿವರ್ಷ ಜಿಎಸ್‌ಟಿ ಪರಿಹಾರ ನೀಡುತ್ತಿರುವ ಕೇಂದ್ರ ಸರಕಾರ […]