ಹಿಂದಿರುಗಿ ನೋಡಿದಾಗ ಡಾ.ನಾ.ಸೋಮೇಶ್ವರ ಸಾಂಪ್ರದಾಯಿಕ ಚೀನಿ ವೈದ್ಯಕೀಯವು ಪ್ರಪಂಚದ ಅತ್ಯಂತ ಪ್ರಾಚೀನ ವೈದ್ಯಕೀಯ ಪದ್ಧತಿಗಳಲ್ಲಿ ಒಂದು. ಇದು ಸುಮಾರು ೪೦೦೦ ವರ್ಷಗಳ ಹಿಂದೆ ಹುಟ್ಟಿತು ಎನ್ನಬಹುದು. ಸಾಂಪ್ರದಾಯಿಕ ಚೀನಿ ವೈದ್ಯಕೀಯದ ವಿಶೇಷ ಗಳಲ್ಲಿ ಸೂಜಿಚಿಕಿತ್ಸೆ (ಆಕ್ಯು ಪಂಕ್ಚರ್), ಚೀನಿ ಮೂಲಿಕಾ ಚಿಕಿತ್ಸೆ, ಸುಡು ಚಿಕಿತ್ಸೆ (ಮಾಕ್ಸಿಬಶನ್) ಮಸಾಜು, ರಕ್ತವಿಮೋಚನ ಮತ್ತು ಕಪ್ಪಿಂಗ್ ಮುಖ್ಯವಾದವು. ಚೀನಾವನ್ನು ಶಾಂಗ್ ವಂಶವು (ಕ್ರಿ.ಪೂ.೧೬೦೦-ಕ್ರಿ.ಪೂ.೧೦೪೬) ಆಳುತ್ತಿದ್ದ ಅವಧಿಯಲ್ಲಿ ಸಾಂಪ್ರದಾಯಿಕ ಚೀನಿ ವೈದ್ಯಕೀಯವು ಆರಂಭವಾಯಿತು ಎನ್ನಲಾಗಿದೆ. ಆಗ ಚೀನಿಯರ ವೈದ್ಯಕೀಯ ಅಧಿದೇವತೆ ‘ಶಾಂಗ್‌ಡಿ’. ಆ […]