ಪಿವಿಆರ್ ಐನಾಕ್ಸ್ ಕಂಪನಿಯು (OTT Effect) ಈ ವರ್ಷ ಈಗಾಗಲೇ 85 ಚಿತ್ರಮಂದಿರಗಳನ್ನು ಮುಚ್ಚಿದೆ. 2025ರಲ್ಲಿ ಇನ್ನೂ 70 ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಒಟಿಟಿ ಪ್ಲಾಟ್ ಫಾರ್ಮ್‌ಗಳುಚಿತ್ರಮಂದಿರಗಳಿಗೆ ಭಾರಿ ಸವಾಲನ್ನು ಒಡ್ಡುತ್ತಿವೆ. ಇದರ ಜತೆಗೆ, ಲೋಕಸಭೆ ಚುನಾವಣೆ ಮತ್ತು ಐಪಿಎಲ್ ಪಂದ್ಯಾವಳಿ ಕೂಡ ಪಿವಿಆರ್ ಆದಾಯದ ಮೇಲೆ ಪರಿಣಾಮ ಬೀರಿದೆ.