ಗಂಟಾಘೋಷ ಗುರುರಾಜ್ ಗಂಟಿಹೊಳೆ ರಾಜ್ಯದಲ್ಲಿ ಒಟ್ಟು ೧,೩೨,೧೦೯ ಎಕರೆ ಗೋಮಾಳ ಜಮೀನು ಇದೆ ಎಂದು ಹೇಳಲಾಗಿದೆ. ಇದರಲ್ಲಿ, ಗಣನೀಯ ಭಾಗದ ಒತ್ತುವರಿಯಾಗಿದ್ದು ಇದರ ದಾಖಲಾತಿಯು ಆಳುವ ಸರಕಾರದ ಬಳಿಯಿಲ್ಲವೆಂಬುದು ಶೋಚನೀಯ ಸ್ಥಿತಿ. ಅಕ್ರಮವಾಗಿ ಸಾಗುವಳಿ ಚೀಟಿ ಮಾಡಿಸಿಕೊಂಡು ಸ್ವಂತಕ್ಕೆ ಬಳಕೆ ಮಾಡಿಕೊಂಡಿರುವ ಘಟನೆಗಳು ರಾಜ್ಯಾದ್ಯಂತ ನಡೆದಿವೆ. ಇದು ರೈತರ ಬಗ್ಗೆ, ಗೋಮಾಳ ಮತ್ತು ಗೋವುಗಳ ಬಗ್ಗೆ ತೋರ ಲಾಗುತ್ತಿರುವ ನಿರ್ಲಕ್ಷ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಭಾರತದಲ್ಲಿ, ಭೂಮಿಯನ್ನು ಅದರ ಬಳಕೆ ಮತ್ತು ಮಾಲೀಕತ್ವದ ಆಧಾರದ ಮೇಲೆ ವಿವಿಧ ವರ್ಗಗಳಾಗಿ […]