ಬಟಿಂಡಾ: ಪಂಜಾಬ್ನ ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿ ಆಚರಿಸಿ ದಶಕಗಳೇ ಕಳೆದುಹೋಗಿವೆ. ದೇಶಾದ್ಯಂತ ಎಲ್ಲರೂ ಸಂಭ್ರಮದಿಂದ ದೀಪಾವಳಿ ಆಚರಿಸಿದರೆ, ಬಟಿಂಡಾದ ಕೆಲವು ಗ್ರಾಮಗಳಲ್ಲಿ ದೀಪಾವಳಿಯನ್ನು ಆಚರಣೆಗೆ ನಿರ್ಬಂಧವಿದೆ. ಪಟಾಕಿ ಸಿಡಿಸುವುದಕ್ಕೂ ಜಿಲ್ಲಾಡಳಿತ ನಿಷೇಧ ಹೇರಿದೆ. ಬಟಿಂಡಾದ ಫೂಸ್ ಮಂದಿ, ಭಾಗು, ಗುಲಾಬ್ಗಢ ಗ್ರಾಮಗಳಲ್ಲಿ ದೀಪಾವಳಿ ಆಚರಿಸಿ ಸಾಕಷ್ಟು ವರ್ಷಗಲೇ ಉರುಳಿ ಹೋಗಿವೆ. ಈ ಗ್ರಾಮಗಳ ಬಳಿ ಸೇನೆಯ ಕಂಟೋನ್ಮೆಂಟ್ ಪ್ರದೇಶ ಮತ್ತು ಮದ್ದು ಗುಂಡುಗಳ ಡಿಪೋ ಇರುವುದರಿಂದ ಜಿಲ್ಲಾಡಳಿತ ದೀಪಾವಳಿ ಆಚರಣೆ ನಿಷೇಧಿಸಿದೆ. ಇದರಿಂದಾಗಿ ಗ್ರಾಮಸ್ಥರು ಕಳೆದ […]