ಢಾಕಾ: ನೈಋತ್ಯ ಬಾಂಗ್ಲಾದೇಶದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಕೆರೆಗೆ ಉರುಳಿದೆ. ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿ, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 60ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್, ಭಂ ಡಾರಿಯಾ ಉಪಜಿಲ್ಲೆಯಿಂದ ನೈಋತ್ಯ ವಿಭಾಗೀಯ ಕೇಂದ್ರ ಕಚೇರಿಯ ಬಾರಿಶಾಲ್‌ಗೆ ತೆರಳುತ್ತಿದ್ದಾಗ ಝಳಕತಿ ಜಿಲ್ಲೆ ಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿರೋಜ್‌ಪುರದ ಭಂಡಾರಿಯಾದಿಂದ ಹೊರಟ ಬಸ್ 10:00 ಗಂಟೆ ಸುಮಾರಿಗೆ ಬಾರಿಶಾಲ್-ಖುಲ್ನಾ […]