ಬೆಂಗಳೂರು: ಇಂದು ಮುಂಜಾನೆ ನಿಧನರಾದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna Death) ಅವರು ತಮ್ಮ ಆಡಳಿತಾವಧಿಯಲ್ಲಿ ಹಲವು ಪ್ರಮುಖ ಬಿಕ್ಕಟ್ಟುಗಳನ್ನು ಎದುರಿಸಿದ್ದರು. ಕಾಡುಗಳ್ಳ ವೀರಪ್ಪನ್‌ನಿಂದ (Veerappan) ವರನಟ ಡಾ. ರಾಜ್‌ಕುಮಾರ್ (Dr Rajkumar) ಅವರ ಅಪಹರಣ ಅವುಗಳಲ್ಲಿ ಪ್ರಮುಖವಾದುದಾಗಿತ್ತು. 2000ನೇ ಇಸವಿಯ ಜುಲೈ 30ರಂದು ವೀರಪ್ಪನ್, ಆಗ ತಮ್ಮ ಹುಟ್ಟೂರು ಗಾಜನೂರಿನ ತಮ್ಮ ಮನೆಯಲ್ಲಿದ್ದ ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ. ಅವರನ್ನು ಸೆರೆಯಿಂದ ಬಿಡಬೇಕಿದ್ದರೆ ಈಡೇರಿಸಲಾಗದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದ. ಇದರಿಂದ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿತ್ತು. […]