ತಿರುವನಂತಪುರ: ಧಾರ್ಮಿಕ ಆಚರಣೆಗಳಿಗೆ ಆನೆಗಳನ್ನು ಬಾಡಿಗೆಗೆ ಪಡೆಯುವುದು ದುಬಾರಿ ಮತ್ತು ಉತ್ಸವದ ವೇಳೆ ಅವುಗಳು ಮದವೇರಿ ಜನರನ್ನು ಸಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ತ್ರಿಶ್ಶೂರ್ ಜಿಲ್ಲೆಯ ಇರಿಂಜಾಲಕುಡದ ಇರಿಂಜಾಡಪಿಳ್ಳಿ ಶ್ರೀಕೃಷ್ಣ ದೇವಾಲಯವು ಇ-ಆನೆಯ ಮೊರೆ ಹೋಗಿದೆ. 11 ಅಡಿ ಎತ್ತರದ ಇ-ಆನೆಯನ್ನು ಲೋಹ, ರಬ್ಬರ್ ಶೀಟ್ ಮತ್ತು ಮೋಟಾರು ಬಳಸಿ ತಯಾರಿಸಲಾಗಿದೆ. ಆನೆಯ ತಲೆ, ಕಿವಿಗಳು ಮತ್ತು ಬಾಲವು ಚಲಿಸಲು ಮೋಟಾರು ಅಳವಡಿಸಲಾಗಿದೆ. ಈ ಕೃತಕ ಆನೆಯು ಸೊಂಡಿಲಿನಿಂದ ನೀರನ್ನು ಸಿಂಪಡಿಸುವ ಸಾಮರ್ಥ್ಯವನ್ನೂ ಹೊಂದಿದೆ. ಇದರ ಚಲನೆಗಾಗಿ ಕಾಲುಗಳಿಗೆ […]