ಭಾರತೀಯರ ಪಾಲಿಗೆ ಚಿನ್ನದ ಬಾಂಧವ್ಯವು ಯುಗಯುಗಾಂತರಗಳಿಂದ ಅಪ್ಯಾಯಮಾನವಾಗಿದೆ. ಭಾರತೀಯ ಸಂಸ್ಕೃತಿಯ ಅಂಗವಾಗಿದೆ ಈ ಹಳದಿ ಅಮೂಲ್ಯ ಲೋಹ. ನಾನಾ ವಡವೆ ಆಭರಣಗಳಿಂದ ಅಲಂಕೃತವಾದ ಅಬಾಲವೃದ್ದರಿಂದ ತುಂಬಿದ ಕುಟುಂಬಗಳ ವೈಭವೋಪೇತ ದಂತಕತೆಗಳನ್ನು ಸಾರಿ ಹೇಳುವ ವೈವಿದ್ಯಮಯ ಐತಿಹ್ಯ ಭಾರತದ ಸಾಮು ದಾಯಗಳ ಪರಂಪರೆಯಾಗಿದೆ. ನಾವು ಚಿನ್ನವನ್ನು ಧರಿಸಲು ಇಷ್ಟಪಡುತ್ತೇವೆ, ಉಡುಗೊರೆ ಯಾಗಿ ನೀಡಲು ಇಷ್ಟಪಡುತ್ತೇವೆ ಮತ್ತು ಸಂಗ್ರಹಿಸಿ ಜೋಪಾನವಾಗಿಡಲು ಇಷ್ಟಪಡುತ್ತೇವೆ. ಹಣದ ಹೂಡಿಕೆಗೆ ನೂರಾರು ವಿಧಾನಗಳಿದ್ದರೂ, ಸಾಂಪ್ರದಾಯಿಕ ವಾಗಿ ಮೊದಲ ಆಯ್ಕೆ ಚಿನ್ನವಾಗಿದೆ ಎನ್ನುತ್ತಾರೆ “ರುಪೀಕ್” ಚಿನ್ನದಸಾಲ ಸಂಸ್ಥೆಯ […]