Thursday, 12th December 2024

ಗ್ರೀಸ್ ಕರಾವಳಿಯಲ್ಲಿ ಮುಳುಗಿದ ಸರಕು ಸಾಗಣೆ ಹಡಗು: ನಾಲ್ವರು ಭಾರತೀಯರು ನಾಪತ್ತೆ

ಅಥೆನ್ಸ್: ಗ್ರೀಸ್ ದ್ವೀಪ ಲೆಸ್ಬೋಸ್‌ನಲ್ಲಿ ಸರಕು ಸಾಗಣೆ ಹಡಗು ಮುಳುಗಿದ್ದು, ನಾಲ್ವರು ಭಾರತೀಯರು ಸೇರಿದಂತೆ 12 ಮಂದಿ ನಾಪತ್ತೆಯಾಗಿದ್ದಾರೆ. ಹಡಗಿನಲ್ಲಿ ನಾಲ್ವರು ಭಾರತೀಯರು, ಇಬ್ಬರು ಸಿರಿಯಾ ಮತ್ತು ಎಂಟು ಮಂದಿ ಈಜಿಪ್ಟ್‌ನವರು ಸೇರಿ 14 ಮಂದಿ ಸಿಬ್ಬಂದಿ ಇದ್ದರು. ದುರಂತದಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರನ್ನು ರಕ್ಷಿಸಲಾಗಿದೆ. ಸಮುದ್ರದಲ್ಲಿ ಉಂಟಾದ ಪ್ರಕ್ಷುಬ್ಧ ವಾತಾವರಣದಿಂದಾಗಿ ಹಡಗು​ ಮುಳುಗಿದೆ ಎಂದು ತಿಳಿದು ಬಂದಿದೆ. ರಾಪ್ಟರ್ ಹೆಸರಿನ ಹಡಗು ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಿಂದ 6 ಸಾವಿರ ಟನ್ ಉಪ್ಪು ಹೊತ್ತು ಟರ್ಕಿಯ ಇಸ್ತಾನ್‌ಬುಲ್‌ಗೆ ಸಂಚರಿಸುತ್ತಿತ್ತು. ಮಾರ್ಗ […]

ಮುಂದೆ ಓದಿ