Sajid Khan:
ಬಾಲಿವುಡ್ನಲ್ಲಿ MeToo ಆಂದೋಲನದ ಸಮಯದಲ್ಲಿ ಅನೇಕ ಆರೋಪಗಳನ್ನು ಎದುರಿಸಿದ ನಟ ನಿರ್ದೇಶಕ ಸಾಜಿದ್ ಖಾನ್ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದರುರಿಸಬೇಕಾಯಿತು ಎಂದು ಸಂದರ್ಶನ ವೊಂದರಲ್ಲಿ ಹೇಳಿ ಕೊಂಡಿದ್ದಾರೆ. ಕಳೆದ ಆರು ವರ್ಷಗಳಲ್ಲಿ ನಾನು ಮಾನಸಿಕ ಮತ್ತು ಭಾವನಾತ್ಮಕವಾಗಿ ತುಂಬಾ ನೊಂದಿದ್ದೇನೆ. ಹೀಗಾಗಿ ಆರು ವರ್ಷಗಳಲ್ಲಿ ನನ್ನ ಜೀವನವನ್ನು ಹಲವು ಬಾರಿ ಕೊನೆಗೊಳಿಸಲು ನಾನು ಯೋಚಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.