ನವದೆಹಲಿ: ಡಿಜಿಟಲ್ ಚಟುವಟಿಕೆಗಳನ್ನು ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಕೊಡುವುದನ್ನು ಕೂಡಲೇ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಎಚ್ಡಿಎಫ್ಸಿ ಬ್ಯಾಂಕ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆದೇಶ ನೀಡಿದೆ. ಡಿಜಿಟಲ್ ಬ್ಯಾಂಕಿಂಗ್ ಸಂಬಂಧಿಸಿ ಎಚ್ಡಿಎಫ್ಸಿ ಗ್ರಾಹಕರಿಗೆ ಆಗಿರುವ ತೊಂದರೆ ಮತ್ತು ನವೆಂಬರ್ 21ರಂದು ಬ್ಯಾಂಕಿನ ಪ್ರೈಮರಿ ಡೇಟಾ ಸೆಂಟರ್ನಲ್ಲಿ ಪವರ್ ಫೇಲ್ಯೂರ್ ಉಂಟಾದ ಪರಿಣಾಮ ಗ್ರಾಹಕರು ಸಂಕಷ್ಟಕ್ಕೆ ಈಡಾಗಿದ್ದರು. ಡಿಜಿಟಲ್ 2.0 ಯೋಜನೆ ಪ್ರಕಾರ ಗ್ರಾಹಕರಿಗೆ ಪರಿಚಯಿಸಲು ಹೊರಟಿದ್ದ ಎಲ್ಲ ಡಿಜಿಟಲ್ ಸೇವೆ ಮತ್ತು ಪ್ರಸ್ತಾವಿತ ಐಟಿ ಅಪ್ಲಿಕೇ ಶನ್ಗಳನ್ನು […]