ಮಂಗಳೂರು: ಅಖಿಲ ಭಾರತ ಕೊಂಕಣಿ ಪರಿಷತ್ ಆಶ್ರಯದಲ್ಲಿ ನಗರದ ಶಕ್ತಿನಗರದಲ್ಲಿ 25ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನ ಇದೇ 4 ಮತ್ತು 5ರಂದು ನಡೆಯಲಿದೆ. ಅಧ್ಯಕ್ಷತೆಯನ್ನು ಕೊಂಕಣಿ ಕಾದಂಬರಿಗಾರ್ತಿ ಹೇಮಾ ನಾಯ್ಕ್ ವಹಿಸಲಿದ್ದಾರೆ. ಮಾಹಿತಿ ನೀಡಿದ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಚ್.ಎಂ.ಪೆರ್ನಾಲ್, ‘ಹಿಂದಿ ಕವಿ, ವಿಮರ್ಶಕ, ವಿದ್ವಾಂಸ ಉದಯನ್ ವಾಜಪೇಯಿ ಇದೇ 4 ರಂದು ಬೆಳಿಗ್ಗೆ 10ಕ್ಕೆ ಸಮ್ಮೇಳನವನ್ನು ಉದ್ಘಾಟಿಸುವರು. ‘ಸಾಹಿತ್ಯ ಮತ್ತು ಬದುಕು’ ಈ ಕುರಿತು ಅವರು ಶಿಖರೋಪನ್ಯಾಸ ನೀಡುವರು’ ಎಂದರು. ‘ವಿವಿಧ ಗೋಷ್ಠಿಗಳು, […]