ತನ್ನಿಮಿತ್ತ ಅಕ್ಷರ ದಾಮ್ಲೆ, ಮನಶಾಸ್ತ್ರಜ್ಞ ಮತ್ತು ಮನೋಸಂವಾದ ಸ್ಥಾಪಕ ವಿಶ್ವ ಮಾನಸಿಕ ಆರೋಗ್ಯ ದಿನದ ಶುಭಾಶಯಗಳು. ಹೌದು, ಶುಭಾಶಯಗಳು ಅಂತಲೇ ಹೇಳುತ್ತೇನೆ. ಯಾಕೆಂದರೆ, ಒಬ್ಬ ಮನಃ ಶಾಸಜ್ಞನಾಗಿ ನಾನು ಜನರೆಲ್ಲರಿಗೂ ಉತ್ತಮ ಮಾನಸಿಕ ಆರೋಗ್ಯವಿರಲಿ ಎಂದು ಶುಭವನ್ನೇ ಆಶಿಸುತ್ತೇನೆ. ಎಷ್ಟೋ ಜನರಿಗೆ ಇದು ಸ್ವಲ್ಪ ವಿಲಕ್ಷಣ ವೆಂದೆನಿಸಬಹುದು. ಆದರೆ, ಮಾನಸಿಕ ಆರೋಗ್ಯ ಎಂಬುದು ಎಷ್ಟು ಮುಖ್ಯ ಎಂಬುದನ್ನು ಬಹುಶಃ ನಮಗೆ ಕೋವಿಡ್ ಮಹಾಮಾರಿ ತಿಳಿಸಿಕೊಟ್ಟಿದೆ. ಲಾಕ್‌ಡೌನ್ ಆಗಿ ಹಠಾತ್ತಾಗಿ ಜನಜೀವನ ಸ್ತಬ್ಧವಾದಾಗ ಮತ್ತು ಆ ನಂತರ ಮನೆಯಿಂದ […]