ಸ್ಯಾನ್ ಡಿಯಾಗೊ: ಅಮೆರಿಕದ ವಲಸೆ ಮತ್ತು ಸೀಮಾಸುಂಕ ಜಾರಿ ಏಜೆನ್ಸಿಯ ಪ್ರಭಾರಿ ನಿರ್ದೇಶಕ ಸ್ಥಾನಕ್ಕೆ ಜೊನಾಥನ್ ಫಹೆ ಅವರು ರಾಜೀನಾಮೆ ನೀಡಿದ್ದಾರೆ. ಕೆಲವು ವಾರಗಳ ಹಿಂದಷ್ಟೇ ಜೊನಾಥನ್ ನಿರ್ದೇಶಕ ಸ್ಥಾನವನ್ನು ವಹಿಸಿಕೊಂಡಿದ್ದರು. ರಾಜೀನಾಮೆ ವಿಷಯವನ್ನು ಇಮೇಲ್ ಮೂಲಕ ಸಹೋದ್ಯೋಗಿಗಳಿಗೆ ತಿಳಿಸಿರುವ ಜೊನಾಥನ್, ಈ ಕುರಿತು ಯಾವುದೇ ವಿವರ ನೀಡಿಲ್ಲ. ಜೊನಾಥನ್ ಅವರ ರಾಜೀನಾಮೆಯಿಂದ ತೆರವಾದ ಜಾಗಕ್ಕೆ ತಾಯೆ ಜಾನ್ಸರ್ ಅವರು ಏಜೆನ್ಸಿಯ ನಾಲ್ಕನೇ ಪ್ರಭಾರಿ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದಾರೆ. ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡುವ ಮತ್ತು ಅಂತರರಾಷ್ಟ್ರೀಯ ಅಪರಾಧ ತನಿಖೆಗಳನ್ನು […]