Friday, 20th September 2024

ಐಸ್ ಕ್ರೀಮ್ ಬಾಲ್ ಸ್ಫೋಟ: ಬಾಲಕನಿಗೆ ಗಾಯ

ಕಣ್ಣೂರು: ಬಾಂಬ್ ಇದ್ದ ಐಸ್ ಕ್ರೀಮ್ ಬಾಲ್ ಸ್ಫೋಟಗೊಂಡು ಕೇರಳದ 7ನೇ ತರಗತಿ ಬಾಲಕ ಗಾಯಗೊಂಡಿದ್ದಾನೆ. ಈ ಘಟನೆ ಕಣ್ಣೂರಿನ ಧರ್ಮಡೋಮ್‌ನಲ್ಲಿ ನಡೆದಿದೆ. ಖಾಲಿ ಪ್ರದೇಶದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳ ಗುಂಪೊಂದಕ್ಕೆ ಐಸ್ ಕ್ರೀಮ್‌ ನ ಮೂರು ಚೆಂಡು ಗಳು ಸಿಕ್ಕಿದೆ. ಅವರು ಈ ಪೈಕಿ ಒಂದನ್ನು ಆಡುವಾಗ ಅದು ಸ್ಫೋಟಿಸಿದೆ. ಪೊಲೀಸ್ ಬಾಂಬ್ ನಿಷ್ಕ್ರಿಯ ತಜ್ಞರು ಸ್ಥಳಕ್ಕೆ ಧಾವಿಸಿ, ಇನ್ನೆರಡು ಸ್ಫೋಟಕಗಳನ್ನು ನಿಷ್ಕ್ರಿಯ ಗೊಳಿಸಿ ದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮುಂದೆ ಓದಿ