ಮನುಷ್ಯರು ಸಹಜವಾಗೇ ಸಂತೋಷವಾಗಿರಬೇಕು ಎಂಬುದನ್ನು ನಮ್ಮ ಸಮಾಜ ಹಾಗೂ ಸಂಸ್ಕಾರವೂ ಒತ್ತಾಯಿಸುತ್ತವೆ. ಆದರೆ ನಮ್ಮ ಸುತ್ತಲಿನ ಘಟನಾವಳಿಗಳು ಇದನ್ನು ಸುಳ್ಳೆಂದೇ ಸಾಬೀತುಪಡಿಸುತ್ತವೆ. ಐವರಲ್ಲಿ ಒಬ್ಬ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದರೆ, ಪ್ರಪಂಚದ ಶೇ.೩೦ರಷ್ಟು ವ್ಯಕ್ತಿಗಳು ಬದುಕಿನ ಯಾವುದೋ ಒಂದು ಹಂತದಲ್ಲಿ ಮಾನಸಿಕ ಕ್ಷೋಭೆಯಿಂದ ಒದ್ದಾಡುತ್ತಿದ್ದಾರೆ. ಬಹುತೇಕ ಕಾಲ್ಪನಿಕ ಕಥೆಗಳು ಸುಖಾಂತ್ಯದಲ್ಲೇ ಮುಕ್ತಾಯಗೊಳ್ಳುತ್ತವೆ ನೆನಪಿದೆಯೇ? ಕಾಲ್ಪನಿಕ ಕಥೆಗಳಷ್ಟೇ ಅಲ್ಲ, ನಮ್ಮ ಸಿನಿಮಾಗಳಲ್ಲೂ ಅಷ್ಟೇ, ಕೆಟ್ಟದ್ದನ್ನು ಒಳ್ಳೆಯದು ಗೆದ್ದಂತೆ, ಪ್ರೀತಿ ಎಲ್ಲವನ್ನು ಎಲ್ಲರನ್ನೂ ಒಳಗೊಳ್ಳುವಂತೆ, ಹೀರೋ ವಿಲನ್‌ನನ್ನು ಹಿಡಿದುಹಾಕುವಂತೆ ಹೀಗೆ ಟೆಲಿವಿಷನ್ […]