ಪಕ್ಷೇತರರ ಪಾಲಾದ ಗೌರಿಬಿದನೂರು ನಗರಸಭೆಗೌರಿಬಿದನೂರು: ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೆ.9 ಸೋಮವಾರ ಉಪವಿಭಾಗಾ ಧಿಕಾರಿ ಅಶ್ವಿನ್ ರವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಲಕ್ಷ್ಮೀನಾರಾ ಯಣಪ್ಪ ಹಾಗೂ ಉಪಾಧ್ಯಕ್ಷರಾಗಿ ಫರೀದ್ ಆಯ್ಕೆಯಾಗಿದ್ದಾರೆ. ಗೌರಿಬಿದನೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯರ ಬಲವಿದ್ದು. ಅದರಲ್ಲಿ ಕಾಂಗ್ರೆಸ್ 15, ಜೆಡಿಎಸ್ 6, ಬಿಜೆಪಿ 3, ಉಳಿದಂತೆ 7 ಪಕ್ಷೇತರ ಸದಸ್ಯರಿದ್ದರು. ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಸಕ್ರಿಯವಾಗಿದ್ದು, ಬಿಜೆಪಿ ಸದಸ್ಯೆ ಪುಣ್ಯವತಿ […]