ನವದೆಹಲಿ: ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದ ನಗ್ನತೆಯನ್ನು ಉತ್ತೇಜಿ ಸಿದ ಹಿನ್ನೆಲೆ ಟ್ವಿಟರ್ ಅಕ್ಟೋಬರ್ 26 ಮತ್ತು ನವೆಂಬರ್ 25 ರ ನಡುವೆ ಭಾರತದಲ್ಲಿ 45,589 ಖಾತೆಗಳನ್ನು ನಿಷೇಧಿಸಿದೆ. ಅದೇ ಸಮಯದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ 3,035 ಖಾತೆಗಳನ್ನು ತೆಗೆದುಹಾಕಿದ್ದು, ಈ ಮೂಲಕ ಭಾರತದಲ್ಲಿ ಒಟ್ಟು48,624 ಖಾತೆಗಳನ್ನು ಟ್ವಿಟರ್ ನಿಷೇ ಧಿಸಿದೆ ಎಂದು ವರದಿ ಮಾಡಿದೆ. ಟ್ವಿಟರ್ ತನ್ನ ಮಾಸಿಕ ವರದಿಯಲ್ಲಿ ತನ್ನ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳ ಮೂಲಕ ಭಾರತದಲ್ಲಿನ ಬಳಕೆದಾರ ರಿಂದ 755 ದೂರುಗಳನ್ನು ಸ್ವೀಕರಿಸಿತ್ತು. ಅದರಲ್ಲಿ […]