ನವದೆಹಲಿ: ಆಗಸ್ಟ್‌ನಲ್ಲಿ ತನ್ನ ಷರತ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ ಭಾರತೀಯರ ಸುಮಾರು 20 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಫೇಸ್‌ಬುಕ್ ಒಡೆತನದ ವಾಟ್ಸಪ್ ಕಂಪೆನಿ ಶನಿವಾರ ತಿಳಿಸಿದೆ. 20,70,000 ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ವಾಟ್ಸ್‌ಆಯಪ್ ತಿಳಿಸಿದೆ. ಅಲ್ಲದೇ 420 ಕುಂದು ಕೊರತೆ ದೂರು ಗಳನ್ನು ಆಗಸ್ಟ್ ತಿಂಗಳಲ್ಲಿ ವಾಟ್ಸ್‌ಆಯಪ್ ಸ್ವೀಕರಿಸಿದೆ ಎಂಬು ದು ತಿಳಿದು ಬಂದಿದೆ. ಜೂನ್ 16 ರಿಂದ ಜುಲೈ 31 ರವರೆಗೆ 30 ಲಕ್ಷ ಭಾರತೀಯರ ವಾಟ್ಸ್‌ಆಯಪ್ ಖಾತೆಗಳನ್ನು ನಿಷೇಧಿಸಲಾಗಿದ್ದು, ಒಟ್ಟಾರೆಯಾಗಿ ದುರುಪಯೋಗ ತಡೆಯಲು […]