ನವದೆಹಲಿ: ಭಾರತದ ತೈಲ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿ. 30 ಲಕ್ಷ ಬ್ಯಾರೆಲ್ ತೈಲ ಖರೀ ದಿಗೆ ರಷ್ಯಾ ಜತೆ ಒಪ್ಪಂದ ಮಾಡಿಕೊಂಡಿದೆ. ಯಾವುದೇ ದೇಶವು ಇಂಧನ ವಹಿವಾಟಿಗೆ ಸಂಬಂಧಿಸಿ ರಾಜಕೀಯ ಮಾಡ ಬಾರದು’ ಎಂದು ಕೇಂದ್ರ ಸರಕಾರ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಭಾರತದ ಕಂಪೆನಿಗಳು ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ನಿರ್ಬಂಧ ದಿಂದಾಗಿ ರಷ್ಯಾದ ಆರ್ಥಿಕತೆಗೆ ಹೊಡೆತ ಬಿದ್ದಿರುವ ಕಾರಣ, ಭಾರತ ಸಹಿತ ದೊಡ್ಡ ಮಟ್ಟದ ಆಮದುದಾರರಿಗೆ ರಿಯಾಯಿತಿ ದರದಲ್ಲಿ ತೈಲ […]