ಬಡೆಕ್ಕಿಲ ಪ್ರದೀಪ್ ಟೆಕ್ ಟಾಕ್ ಎಲ್ಲಾ ಚೆನ್ನಾಗೇ ನಡೀತಿದೆ ಅಂದುಕೊಳ್ಳುತ್ತಿದ್ದ ಫೇಸ್ಬುಕ್ಗೆ ಇದೊಂದು ಪುಟ್ಟ ಆಘಾತ ಅಂದರೆ ತಪ್ಪಲ್ಲ. ಕಂಪೆನಿ ಸುಲಭ ದಲ್ಲಿ ಒಪ್ಪಿ ಕೊಳ್ಳದಿದ್ದರೂ, ಅಮೆರಿಕಾದ ಫೆಡರಲ್ ಟ್ರೇಡ್ ಕಮಿಶನ್, ಫೇಸ್ಬುಕ್ಗೆ ಈ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಮ್ ಎರಡನ್ನೂ ಮಾರಿಬಿಡು ಅನ್ನುವ ರೀತಿಯ ಸಂದೇಶ ರವಾನಿಸಿದೆ. ಇನ್ಸ್ಟಾಗ್ರಾಮನ್ನು 2012 ಮತ್ತು ವಾಟ್ಸಾಪನ್ನು 2014ರಲ್ಲಿ ಬಿಲಿಯನ್ಗಟ್ಟಲೆ ಡಾಲರ್ ಸುರಿದು ತನ್ನದಾಗಿಸಿಕೊಂಡಿದ್ದ ಫೇಸ್ಬುಕ್ನ ಮನದೊಳಗಿದ್ದ ಒಂದೇ ಉದ್ದೇಶ, ಈ ಫೋಟೋ ಶೇರಿಂಗ್ ಹಾಗೂ ಮೆಸೆಜಿಂಗ್ ಲೋಕದ ಅನಭಿಷಿಕ್ತ ದೊರೆ […]