ಢಾಕಾದಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾಯಿತು. ಬಳಿಕ ಇದು ಹಸೀನಾ ಸರ್ಕಾರದ ಬೆಂಬಲಿಗರು ಎಂದು ಭಾವಿಸಲಾದ ಹಿಂದೂಗಳ ಮೇಲೆ ದಾಳಿಗೆ ಕಾರಣವಾಗಿದೆ. ಹಿಂದೂ ಸನ್ಯಾಸಿ ಮತ್ತು ಬಾಂಗ್ಲಾದೇಶ ಸಮ್ಮಿಲಿತಾ ಸನಾತನಿ ಜಾಗರಣ ಜೋಟೆ ಅವರ ವಕ್ತಾರ ಕೃಷ್ಣ ದಾಸ್ ಅವರ ಬಂಧನವನ್ನು ಖಂಡಿಸಿರುವ ಇಂಟರ್ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ISKCON) ಈಗ ಬಾಂಗ್ಲಾದೇಶ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.