ಕೋಲ್ಕತಾ: ಕುಲಾಧಿಪತಿಯಾಗಿ ತನ್ನ ಒಪ್ಪಿಗೆಯಿಲ್ಲದೆ ರಾಜ್ಯದ 25 ವಿವಿಗಳಿಗೆ ಈವರೆಗೆ ಕುಲಪತಿ ಗಳನ್ನು ನೇಮಕಗೊಳಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಶನಿವಾರ ಆರೋಪಿಸಿದ್ದಾರೆ. ಕುಲಾಧಿಪತಿಯಾಗಿ ಧಂಕರ್, ಕುಲಪತಿಗಳಾಗಿ ನೇಮಕಗೊಳಿಸಿದ್ದ ಆರ್ಟ್ಸ್ ಫ್ಯಾಕಲ್ಟಿಯ ಡೀನ್ ಪ್ರೊಫೆಸರ್ ತಪನ್ ಮಂಡಲ್ ಅವರು ವೈಯಕ್ತಿಕ ಕಾರಣಗಳಿಂದ ಹುದ್ದೆಯನ್ನು ಸ್ವೀಕರಿಸಲು ನಿರಾಕರಿಸಿದ ಬಳಿಕ ಮಮತಾ ಬ್ಯಾನರ್ಜಿ ಸರಕಾರ, ಪ್ರೊ.ಸೋಮ ಬಂಡೋಪಾಧ್ಯಾಯ ಅವರನ್ನು ಡೈಮಂಡ್ ಹಾರ್ಬರ್ ಮಹಿಳಾ ವಿವಿಯ ನೂತನ ಕುಲಪತಿಗಳಾಗಿ ನೇಮಕಗೊಳಿಸಿದ 24 ಗಂಟೆಗಳಲ್ಲಿ ಈ ಆರೋಪ ಹೊರಬಿದ್ದಿದೆ. ಶೋಧ […]