Friday, 13th December 2024

ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌: ಸೆಮಿಫೈನಲ್’ಗೆ ಭಾರತದ ಬಾಕ್ಸರ್‌ಗಳು

ನವದೆಹಲಿ: ಭಾರತದ ನಾಲ್ವರು ಬಾಕ್ಸರ್‌ಗಳು ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸೋಮವಾರ ರಾತ್ರಿ ನಡೆದ ಸ್ಪರ್ಧೆಗಳಲ್ಲಿ ಭಾರತ ಏಳು ಮಂದಿ ಬಾಕ್ಸರ್‌ಗಳು ಕಣಕ್ಕಿಳಿದಿದ್ದರು. ಅದರಲ್ಲಿ ನಾಲ್ವರು ವಿಜಯ ಸಾಧಿಸಿ ಮುನ್ನಡೆದರು. ಪುರುಷ ಮತ್ತು ಮಹಿಳೆಯರಿಗಾಗಿ ನಡೆಯುತ್ತಿರುವ ಟೂರ್ನಿಯಲ್ಲಿ ಯೂತ್ ಮತ್ತು ಜೂನಿಯರ್ ವಿಭಾಗಗಳನ್ನು ಮೊದಲ ಬಾರಿಗೆ ಒಟ್ಟಾಗಿ ಆಯೋಜಿಸಲಾಗಿದೆ. 71 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಜೈದೀಪ್ ರಾವತ್‌ ಎರಡನೇ ಸುತ್ತಿನ ಹಣಾಹಣಿಯಲ್ಲಿ ಯುನೈಟೆಡ್‌ ಅರಬ್ ಎಮಿರೇಟ್ಸ್‌ನ ಮೊಹಮ್ಮದ್ ಈಸಾ ಎದುರು ಗೆದ್ದು ಬೀಗಿದರು. […]

ಮುಂದೆ ಓದಿ