ಭುವನೇಶ್ವರ: ‘ಜವಾದ್’ ಚಂಡಮಾರುತದ ಪ್ರಭಾವದಿಂದ ಒಡಿಶಾದ ಹಲವೆಡೆ ಭಾರಿ ಮಳೆಯಾಗಿರುವುದು ವರದಿಯಾಗಿದೆ. ಕಳೆದ 6 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತವು ಉತ್ತರ-ಈಶಾನ್ಯಕ್ಕೆ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸಿದೆ. ಗೋಪಾಲಪುರದಿಂದ 90 ಕಿ.ಮೀ, ಪುರಿಯಿಂದ 120 ಕಿ.ಮೀ, ಪರದೀಪ್‌ನಿಂದ 210 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿದೆ. ಗಾಂಜಮ್, ಖುದ್ರಾ, ಪುರಿ, ಖೇಂದ್ರಪರ, ಕೇಂದ್ರಪರಾ ಹಾಗೂ ಜಗತ್‌ಸಿಂಗ್‌ಪುರ ದಲ್ಲಿ ಭಾನುವಾರದಿಂದ ಭಾರಿ ಮಳೆಯಾಗುತ್ತಿದೆ. ಕಾಳಿಕೋಟೆಯಲ್ಲಿ ದಾಖಲೆಯ 158 ಎಂ.ಎಂ. ಮಳೆಯಾಗಿದ್ದು, ನಯಾಗಡ ದಲ್ಲಿ 107.5 ಎಂ.ಎಂ.ಮಳೆಯಾಗಿದೆ.
ಭುವನೇಶ್ವರ್: ಜವಾದ್ ಚಂಡಮಾರುತದ ಕಾರಣ ಭಾನುವಾರ ವಿಶ್ವವಿದ್ಯಾಲಯ ಧನಸಹಾಯ ಆಯೋಗ -ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಯುಜಿಸಿ-ಎನ್‍ಇಟಿ) ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫಾರಿನ್ ಟ್ರೇಡ್(ಐಐಎಫ್‍ಟಿ)ನ ಒಂದು ಪ್ರವೇಶ ಪರೀಕ್ಷೆಯನ್ನು ಒಡಿಶಾ,...
ನವದೆಹಲಿ: ಜವಾದ್ ಚಂಡಮಾರುತ ಉತ್ತರ ಆಂಧ್ರಪ್ರದೇಶಕ್ಕೆ ಶನಿವಾರ ಅಪ್ಪಳಿ ಸುವ ಸಾಧ್ಯತೆಯಿರುವುದರಿಂದ, ಅಲ್ಲಿನ ಸರ್ಕಾರವು ಮೂರು ಜಿಲ್ಲೆಗಳಿಂದ 54,008 ಜನರನ್ನು ಸ್ಥಳಾಂತರಿಸಿದೆ. ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರನ್ನು,...
ಬೆಂಗಳೂರು: ಜವಾದ್ ಚಂಡಮಾರುತದ ಪರಿಣಾಮದಿಂದ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆ ಹೆಚ್ಚಾಗಲಿದೆ. ರಾಜ್ಯಾದ್ಯಂತ ಇಂದಿನಿಂದ ಡಿ. 6ರವರೆಗೆ ವರುಣನ ಆರ್ಭಟವಿರಲಿದೆ. ಕರ್ನಾಟಕದಲ್ಲಿ ಮಳೆ ಮುಂದುವರೆಯುತ್ತಿದ್ದು, ಇಂದಿನಿಂದ ಮಳೆಯ ಜೊತೆಗೆ...